ಯಲಬುರ್ಗಾ ಶ್ರೀ ದ್ಯಾಮಾಂಬಿಕಾ ದೇವಿ ಕಾರ್ತಿಕೋತ್ಸವ ವಿಜೃಂಭಣೆಯಿಂದ ಆಚರಣೆ
ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಗ್ರಾಮ ದೇವತೆ ಶ್ರೀ ದ್ಯಾಮಂಬಿಕಾದೇವಿ ಕಾರ್ತಿಕೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಗ್ರಾಮ ದೇವತೆ ದ್ಯಾಮಂಬಿಕಾ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು , ಸಂಜೆ ಕಾರ್ತಿಕೋತ್ಸವದಲ್ಲಿ ಯಲಬುರ್ಗಾ ಪಟ್ಟಣದ ಭಕ್ತರು ಹಣತೆ ಬೆಳಗಿಸಿ ಭಕ್ತಿ ಭಾವ ಮೆರೆದರು. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಮುಖಂಡರಾದ ವೀರಣ್ಣ ಹುಬ್ಬಳ್ಳಿ ಮಾತನಾಡಿ ಪ್ರತಿದಿನ ದೀಪ ಬೆಳಗಿಸುವುದರ ಜೊತೆಗೆ ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಮಾರ್ಗದತ್ತ ಕೊಂಡೊಯ್ಯುವುದೇ ನಿಜವಾದ ಕಾರ್ತಿಕೋತ್ಸವ ಎಂದು ಅವರು ಹೇಳಿದರು.
ಮುಖಂಡರಾದ ಅಂದಾನಗೌಡ ಉಳಾಗಡ್ಡಿ ಮಾತನಾಡಿ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮಂಬಿಕಾ ದೇವಿ ಅತ್ಯಂತ ಶಕ್ತಿಯುಳ್ಳದೇವತೆಯಾಗಿದ್ದು ಇಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಸಕಲ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ. ಕೊರೋನ ಸಂದರ್ಭದಲ್ಲಿ ಗ್ರಾಮದೇವತೆ ಆಶೀರ್ವಾದ ಇದ್ದಿದ್ದರಿಂದ ಯಲಬುರ್ಗಾ ಪಟ್ಟಣದ ಜನತೆ ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲೇಶಗೌಡಮಾಲಿ ಪಾಟೀಲ, ಸಿದ್ದರಾಮೇಶ ಬೆಲೇರಿ, ಚಂದ್ರಶೇಖರ ಕಮ್ಮಾರ, ವಿರೂಪಾಕ್ಷಯ್ಯ ಗಂಧದ, ಸಂಗಪ್ಪ ರಾಮತಾಳ , ಶರಣಬಸಪ್ಪ ದಾನಕೈ, ಶರಣಪ್ಪ ಕೊಡಗಲಿ, ಸುರೇಶ ಕಮ್ಮಾರ, ಮುಕ್ಕಣ್ಣ ಬಡಿಗೇರ, ಚೆನ್ನಪ್ಪ ಬಡಿಗೇರ, ಮಹೇಶ ಬಡಿಗೇರ, ಪ್ರಶಾಂತ ಬಡಿಗೇರ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ಇನ್ನೂ ಅನೇಕ ಮುಖಂಡರು, ಮಹಿಳೆಯರು ಹಾಗೂ ಭಕ್ತರು ಭಾಗವಹಿಸಿದ್ದರು.
ನಿರ್ಭಯ ನ್ಯೂಸ್ ಕನ್ನಡ
" ಇದು ಪ್ರಜಾ ಧ್ವನಿ "
Post a Comment