ಯಲಬುರ್ಗಾ ಬಯಲು ರಂಗಮಂದಿರದಲ್ಲಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ
ಯಲಬುರ್ಗಾ
ನಮೋ ಭಾರತ ಕಾರ್ಯಕ್ರಮವನ್ನ ಇದೇ ದಿನಾಂಕ 16 ರಂದು ಯಲಬುರ್ಗಾ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಬೇಕೆಂದು ನಮೋ ಬ್ರಿಗೇಡ್ ಜಿಲ್ಲಾ ಯುವ ಸಂಚಾಲಕ ಶರಣೇಗೌಡ ಯುವ ಭಾರತ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷದಲ್ಲಿ ಮೋದಿ ವಿಕಾಸದ ಹಬ್ಬವನ್ನೆ ಮಾಡಿದ್ದಾರೆ ಅಭಿವೃದ್ಧಿಯ ಕಲ್ಪನೆಯನ್ನ ವಿಸ್ತಾರಗೊಳಿಸಿದ್ದಾರೆ. ನರೇಂದ್ರ ಮೋದಿಯವರನ್ನ ಸೋಲಿಸಲು ಅನೇಕ ಪಕ್ಷದ ನಾಯಕರು ಪ್ರಯತ್ನದಲ್ಲಿದ್ದಾರೆ.70 ವರ್ಷಗಳ ತಪಸ್ಸಿನ ನಂತರ
ಇಂತಹ ನಾಯಕ ನಮಗೆ ಸಿಕ್ಕಿದ್ದಾರೆ 2024 ರ ಲೋಕ ಸಭಾ ಚುನಾವಣೆಯಲ್ಲಿ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳು ಲಭಿಸಲೆಂದು ಯುವ ಬ್ರೀಗೇಡ್ ಉದ್ದೇಶಿಸಿ ಮಾತನಾಡಲು ಯುವ ಬ್ರಿಗೇಡ್ ಸಂಸ್ಥಾಪಕ ಮುಖ್ಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ರವರು ಇದೇ 16 ರಂದು ಸಾಯಂಕಾಲ ಯಲಬುರ್ಗಾ ಪಟ್ಟಣದ ರಂಗ ಮಂದಿರದಲ್ಲಿ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಆದ್ದರಿಂದ ಯವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಅವರು ಹೇಳಿದರು.
ನಂದೀಶ ಮುಡಿಯಪ್ಪ ನವರ,
ತಾಲೂಕ ಸಂಚಾಲಕ ಗುರುರಾಜ ಹುಣಶಿಹಾಳ,
,ಮಂಜುನಾಥ ಶೆಟ್ಟರ, ಕುಮಾರ ಗೌಡ ಇಟಗಿ, ಚಂದ್ರಶೇಖರ ಕುಷ್ಠಗಿ, ಭೀಮೇಶ ತಾವರಗೇರಿ ಶಂಕ್ರಗೌಡ ,ಸಂಜೀವ ಜರಕುಂಟಿ, ರಾಜು ದ್ಯಾಂಪೂರು. ಸೇರಿದಂತೆ ಮತ್ತಿತರರು ಸುದ್ದಿಗೊಷ್ಠಿಯಲ್ಲಿ ಪಾಲ್ಗೊಂಡಿದ್ದರು.
ನಿರ್ಭಯ ನ್ಯೂಸ್ ಕನ್ನಡ
" ಇದು ಪ್ರಜಾ ಧ್ವನಿ"
Post a Comment