ಹಿರೇಮ್ಯಾಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ
ಯಲಬುರ್ಗಾ : ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತಿ ಎಸ್.ಸಿ.ಮಿಸಲು ಸ್ಥಾನಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಳಪ್ಪ ನಿಂಗಪ್ಪ ವಿರಾಪೂರ, ಉಪಾಧ್ಯಕ್ಷರಾಗಿ ಬೋರಮ್ಮ ಹೊನ್ನಪ್ಪ ಗಾಣಿಗೇರ ಆಯ್ಕೆಯಾಗಿದ್ದಾರೆ
ತಾಲೂಕಿನ ಹಿರೇಮ್ಯಾಗೇರಿ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆ ಫಲಿತಾಂಶ ಘೋಷಣೆ ಮಾಡಿ ಚುನಾವಣಾಧಿಕಾರಿ ಎಫ್,ಎಂ,ಕಳ್ಳಿ ಮಾತನಾಡಿ ಹಿರೇಮ್ಯಾಗೇರಿ ಗ್ರಾಮ ಪಂಚಾಯತ ಒಟ್ಟು 13 ಜನ ಸದಸ್ಯರ ಪೈಕಿ ಪರಿಶಿಷ್ಟ ಜಾತಿಯ ಕಳಕಪ್ಪ ನಿಂಗಪ್ಪ ವೀರಾಪುರ 9 ಮತಗಳನ್ನ ಪಡೆದು ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.ಪ್ರತಿಸ್ಪರ್ಧಿ ಶಾಂತಮ್ಮ ಬಸವರಾಜ ಬಂಡಿ ವಡ್ಡರ ಕೇವಲ 3 ಮತಗಳನ್ನ ಪಡೆದು ಪರಾಭವಗೊಂಡಿದ್ದು, ಒಂದು ಮತ ಮಾತ್ರ ತಿರಸ್ಕೃತಗೊಂಡಿದೆ
ಉಪಾಧ್ಯಕ್ಷ ಸ್ಥಾನಕ್ಕೆ ಯಾವೂದೆ ನಾಮ ಪತ್ರ ಸಲ್ಲಿಕೆ ಯಾಗದ ಕಾರಣ ಅವಿರೋಧವಾಗಿ ಬೋರಮ್ಮ ಹೊನ್ನಪ್ಪ ಗಾಣಿಗೇರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಫಲಿತಾಂಶ ಘೋಷಣೆಯಾಗುತಿದ್ದಂತೆ
ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಪಟಾಕೆ ಸಿಡಿಸಿ, ಪಕ್ಷದ ಭಾವೂಟ ಹಿಡಿದು ಸಂಭ್ರಮಿಸಿದರು.
ಮಾಹಂತೇಶ ಗಾಣಿಗೇರ,ಮುಖಂಡರುಗಳಾದ ಅಂದಪ್ಪ ಸುಭೇದಾರ,ಕಲ್ಲಪ್ಪ ಗುರಿಕಾರ,
ಶಿವರಡ್ಡಿ ತೋಟದ,ಕಳಕಪ್ಪ ಕಲ್ಗುಡಿ,ಮಾಹಂತೇಶ ಬೆಲ್ಲದ, ದ್ಯಾಮಣ್ಣ ಮಡಿಕೇರಿ,ಎಸ್.ಜಿ.ಹೊಟ್ಟಿನ.
ಮೀಥುನ ದಿವಟರ,ಕಳಕಪ್ಪ ತೋಟದ,ನಧಾಫ ವಕೀಲರು ಸೇರಿದಂತೆ ಮತ್ತೀತರರು ವಿಜಯೋತ್ಸವದಲ್ಲಿ ಪಾಲ್ಗೋಂಡಿದ್ದರು.
ನಿರ್ಭಯ ನ್ಯೂಸ್ ಕನ್ನಡ
Post a Comment