ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳು ಗುಣಮಟ್ಟದ್ದಾಗಿವೆ : ಸಿಇಒ ರಾಹುಲ್ ರತ್ನಂ ಪಾಂಡೆ
ಕೊಪ್ಪಳ : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಲ್ಯ ಮಿಷನ್ ಕೊಪ್ಪಳರವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕೊಪ್ಪಳ ಜಿಲ್ಲಾಧಿಕಾರಿ ನಳೀನಿ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದ ಒಂಟಗೋಡಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಮ್ ಪಾಂಡೆ ಭೇಟಿ ನೀಡಿ ವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಮ್ ಪಾಂಡೆ ಮಾತನಾಡಿ ಶ್ರೀ ಗವಿಸಿದ್ದೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಸಂಜೀವಿನಿ ಸ್ವ ಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟ ಅತ್ಯಂತ ಸಂತೋಷ ತಂದಿದೆ. ಸ್ವಸಹಾಯ ಗುಂಪುಗಳ ಉತ್ಪನ್ನಗಳು ಅತ್ಯಂತ ಗುಣಮಟ್ಟದ್ದಾಗಿದ್ದು ಹಾಗಾಗಿ ಇಲ್ಲಿಯವರೆಗೂ 60 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಉತ್ಪನ್ನಗಳನ್ನು ಸಾರ್ವಜನಿಕರು ಜಾತ್ರೆಯಲ್ಲಿ ಖರೀದಿಸಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿ. ಎಫ್. ಒ ಕಾವ್ಯ ಚತುರ್ವೇದಿ,ಸಹಾಯಕ ನಿರ್ದೇಶಕರಾದ ಮಂಜುನಾಥ ಬೆಲ್ಲದ,ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಅಂಬಣ್ಣ,
,ಎನ್ ಯು ಎಲ್ ಎಮ್ ಅಭಿಯೋಜಕರಾದ ಪ್ರವೀಣ, ಅಹಮದ್ ಹುಸೇನ್, ವಿಶ್ವನಾಥ್, ವೈ ಪಿ ಎನ್ ಆರ್ ಎಲ್ ಎಂ ಅನ್ನಪೂರ್ಣ,
ತಾಲೂಕ ವ್ಯವಸ್ಥಾಪಕರಾದ ಉದಯಕುಮಾರ, ಸಂಗಣ್ಣ ಸಂಗಪುರ, ಮಲ್ಲಿಕಾರ್ಜುನ, ಶಾಮ್, ಜಾಕಿರ್ ಹುಸೇನ್ ರಾಜೀವ್ ಭಜಂತ್ರಿ, ಮಂಜುಳಾ ಮತ್ತಿತರರು ಇದ್ದರು.
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾ ಧ್ವನಿ"
Post a Comment