ಯಲಬುರ್ಗಾ : ತಾಲೂಕಿನ ಸುಕ್ಷೇತ್ರ ದಮ್ಮೂರು ಗ್ರಾಮದ ಶ್ರೀ ಭೀಮಾಂಬಿಕಾದೇವಿ ಜಾತ್ರಾ ಮಹೋತ್ಸವ ಹಾಗೂ 35ನೇ ಪುರಾಣ ಮಹಾ ಮಂಗಳೋತ್ಸವ ನಿಮಿತ್ಯ ಉಚಿತ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ಹಾಗೂ ಮಹಾ ರಥೋತ್ಸವವು ಬುಧವಾರ ಸಡಗರ, ಸಂಭ್ರಮದೊಂದಿಗೆ ಅತ್ಯಂತ ಅದ್ದೂರಿಯಾಗಿ ಜರುಗಿತು.
ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡ ಸಹಸ್ರಾರು ಭಕ್ತರು ತಳಿರು, ತೋರಣ ಹಾಗೂ ವೈವಿದ್ಯಮಯ ಹೂವುಗಳಿಂದ ಸಿಂಗಾರಗೊಳಿಸಿ ಮಹಾರಥೋತ್ಸವವನ್ನು ಮಠದ ಆವರಣದಿಂದ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಪಾದಗಟ್ಟೆ ತಲುಪಿ ನಂತರ ಸ್ವಸ್ಥಾನಕ್ಕೆ ತಲುಪಿಸಿದರು.
ಮಹಾರಥ ಚಾಲನೆ ಆರಂಭವಾಗುತ್ತಿದ್ದಂತೆಯೇ ಭಕ್ತರು ಬಾಳೆಹಣ್ಣು, ಉತ್ತತ್ತಿಯನ್ನು ತೇರಿಗೆ ಎಸೆಯುವ ಮೂಲಕ ಹರಕೆ ತೀರಿಸಿದರು.ಮಹಾರಥೋತ್ಸವಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ತೇರು ಎಳೆಯುವ ಮೂಲಕ ರಥೋತ್ಸವ ಯಶಸ್ವಿಗೊಳಿಸಿದರು.
ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ದಮ್ಮೂರು ಗ್ರಾಮದ ಜನರು ಜಾತ್ಯಾತೀತ ಮನೋಭಾವದಿಂದ ಬಾಳುವ ಮೂಲಕ ಈ ಗ್ರಾಮ ಮಾದರಿ ಗ್ರಾಮವಾಗಿದೆ. ಮಹಾ ದೇವತೆ ಇಟಗಿ ಶ್ರೀ ಭೀಮಾಂಬಿಕೆದೇವಿಯ ಆಶೀರ್ವಾದದಿಂದ ಇಲ್ಲಿಯ ಜನರು ಎಲ್ಲರೂ ಒಂದೇ ಎನ್ನುವ ಮನೋಭಾವದಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.
ಸಮಾರಂಭದ ಸಾನಿಧ್ಯವನ್ನು ಷಣ್ಮುಖಪ್ಪಜ್ಜ ಧರ್ಮರಮಠ, ನಾಗಲಿಂಗಪ್ಪಜ್ಜ ಧರ್ಮರಮಠ, ಶೇಖರಪ್ಪಜ್ಜ ಧರ್ಮರಮಠ, ಶರಣಯ್ಯ ಹಿರೇಮಠ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕಾ ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೋಲಿಸ್ ಪಾಟೀಲ್, ಜಿಪಂ ಮಾಜಿ ಸದಸ್ಯರುಗಳಾದ ಅರವಿಂದಗೌಡ ಪಾಟೀಲ್,
ಈರಪ್ಪ ಕುಡಗುಂಟಿ,ತಾಲೂಕ ಪಂಚಾಯತ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ರೈತ ಮುಖಂಡ ರಸೂಲಸಾಬ ಹಿರೇಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜಪ್ಪ ಹಗೇದಾಳ,ಭೀಮಪ್ಪ ಜರಕುಂಟಿ,ದುರಗಪ್ಪ ಹರಿಜನ,ಎಸ್.ಕೆ.ದಾನಕೈ,ವಸಂತ ಭಾವಿಮನಿ,ನಾಗರಾಜ ತಲ್ಲೂರು,ಈರಪ್ಪ ರಾವಣಕಿ ಸೇರಿದಂತೆ ಗ್ರಾಮದ ಜಾತ್ರಾ ಮಹೋತ್ಸವ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾ ಧ್ವನಿ"
Post a Comment