ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್, ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನೆ

ಯಲಬುರ್ಗಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ  ಸಿಎಂ ಸಿದ್ದರಾಮಯ್ಯನವರಿಗೆ ಅಭಿನಂದನೆ

ಯಲಬುರ್ಗಾ : ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಪತ್ರಕರ್ತರಿಗಾಗಿ ಈ ಸಲದ   ಬಜೆಟ್‌ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್ ಯೋಜನೆಯನ್ನು ಘೋಷಣೆ ಮಾಡಿರುವದು ಸಂತಷ ತಂದಿದೆ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕ ಅಧ್ಯಕ್ಷ ಶ್ರೀಕಾಂತಗೌಡ ಮಾಲಿ ಪಾಟೀಲ್ ಹರ್ಷವ್ಯಕ್ತ ಪಡಿಸಿದ್ದಾರೆ
ಯಲಬುರ್ಗಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ನೈತೃತ್ವದಲ್ಲಿ 2023 ರಂದು ಪ್ರೀಡಂ ಪಾರ್ಕನಲ್ಲಿ ಹೋರಾಟ ಹಾಗೂ ಬೆಳಗಾವಿ ಸುವರ್ಣ ಸೌಧದ ಮುಂಭಾಗದಲ್ಲಿ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ  ನಿರಂತರ ಹೋರಾಟದ ಪ್ರತಿಫಲದಿಂದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ದೊರಕಿದೆ.  ಮುಖ್ಯ ಮಂತ್ರಿ ಸಿದ್ದರಾಮಯ್ಯನವರು 21-8-2023 ರಂದು ಮುಖ್ಯ ಮಂತ್ರಿ ಗೃಹ ಕಛೇರಿ ಕೃಷ್ಣಾದಲ್ಲಿ ಸಭೆ ಸೇರಿ ಮುಂದಿನ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ನೀಡುವದಾಗಿ ಭರವಸೆ  ನೀಡಿದ್ದರು. ಕೊಟ್ಟ ಮಾತಿನಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಜೆಟ್ ವೇಳೆ ಉಚಿತ ಬಸ್ ಪಾಸ್ ಘೋಷಣೆ ಮಾಡಿರುವದಕ್ಕೆ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಮುಖಾಂತರ ಕೃತಜ್ಞತೆ ಸಲ್ಲಿಸುತ್ತೆವೆ.ಪತ್ರಕರ್ತರಿಗೆ ಉಚಿತ ಬಸ್ ಪಾಸ  ನಿಡುವದಷ್ಠೆಯಲ್ಲ, ಪತ್ರಕರ್ತರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು, ಪತ್ರಕರ್ತರನ್ನ ಕಾರ್ಮಿಕ ಇಲಾಖೆಗೆ ಒಳಪಡಿಸಬೇಕು ಪತ್ರಕರ್ತರಿಗೆ ನಿವೇಶನ ಹಾಗೂ ಪತ್ರಕರ್ತರು ನಿವೃತರಾದ ನಂತರ  ಅವರ ಕುಟುಂಬಕ್ಕೆ ಮಾಶಾಸನ ಜಾರಿ ಮಾಡಬೇಕು. ಧ್ವನಿ ಸಂಘಟನೆಯ  ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ರವರ ನೇತೃತ್ವದ ಹೋರಾಟಕ್ಕೆ ಜಯ ಸಿಕ್ಕಿದೆ ಮುಂದೆಯು ಜಯ ಸಿಗುತ್ತದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಡಪದ,
ಗೌರವಾಧ್ಯಕ್ಷ ಶರಣ ಬಸಪ್ಪ ದಾನಕೈ,ಉಪಾಧ್ಯಕ್ಷ ಹುಸೇನ್ ಸಾಬ ಮೋತೆಖಾನ್, ಸಹ ಕಾರ್ಯದರ್ಶಿ ಮೌನೇಶ ಹೆಚ್ ಮದ್ಲುರು,ಖಜಾಂಚಿ ಸಿ.ಎ.ಆದಿ,ಸದಸ್ಯರುಗಳಾದ  ಶ್ಯಾಮಿದಸಾಬ ತಾಳಕೇರಿ, ನೀಲಪ್ಪ ಖಾನಾವಳಿ, ಬಸವರಾಜ ಕಳಸಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

          ನಿರ್ಭಯ ನ್ಯೂಸ್ ಕನ್ನಡ
             " ಇದು ಪ್ರಜಾಧ್ವನಿ "

Post a Comment

Previous Post Next Post

FLASH

Contact for News and Ads on Nirbhaya News Kannada : 9060723440