ಕಾಂಗ್ರೆಸ್ ಸರ್ಕಾರ ದೇಶದ ಅಭಿವೃದ್ಧಿ ಮಾಡಲಿಲ್ಲ: ಚಕ್ರವರ್ತಿ ಸೂಲಿಬೆಲೆ
ಯಲಬುರ್ಗಾ : ಶ್ರೇಷ್ಟ ಭಾರತಕ್ಕಾಗಿ ಈ ದೇಶದಲ್ಲಿ ಮತ್ತೊಮ್ಮೆ ಮೋದಿ ಅವರು ಪ್ರಧಾನಮಂತ್ರಿ ಯಾಗಬೇಕೆಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ನಮೋ ಬ್ರಿಗೆಡ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಮತ್ತೆ ಪ್ರಧಾನಿಯಾಗಬೇಕು. ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಬೇಕು. ಅದಕ್ಕಾಗಿ ನಮ್ಮ ನಮೋ ಬ್ರಿಗೇಡ್ ಹಗಲಿರಳು ಶ್ರಮ ವಹಿಸುತ್ತಿದೆ. ಕಳೆದ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದೇಶದ ಅಭಿವೃದ್ಧಿ ಮಾಡಲಿಲ್ಲ, ಬದಲಾಗಿ ತಮ್ಮ ತಮ್ಮ ಕುಟುಂಬಗಳ ಅಭಿವೃದ್ಧಿ ಮಾಡಿಕೊಂಡಿದೆ.
ಜನರನ್ನು ಜಾಗೃತಗೊಳಿಸಿ ರಾಷ್ಟ್ರದಲ್ಲಿ ಮೋದಿ ಸರಕಾರದ ಮೊದಲಿನ ಭಾರತಕ್ಕೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಈಗಿನ ಭಾರತದ ನಡುವಿನ ವ್ಯತ್ಯಾಸವನ್ನು ಜನತೆಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಅಭಿಯಾನವನ್ನು ನಡೆಸಲಾಗುತ್ತಿದೆ. ಹಿಂದೂಗಳ ಮಹೋನ್ನತ ಕನಸಾಗಿದ್ದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣವು ಬಿಜೆಪಿಯ ಪ್ರಯತ್ನದಿಂದ ಸಾಧ್ಯವಾಗಿದೆ. ನಮ್ಮ ದೇಶವನ್ನು ಕಡೆಗಣಿಸುತ್ತಿದ್ದ ಜಗತ್ತಿನ ರಾಷ್ಟ್ರಗಳು ಮೋದಿಯವರ ಸಮರ್ಥ ನಾಯಕತ್ವದ ಪರಿಣಾಮದಿಂದಾಗಿ ಇಂದು ರಾಜ ಮರ್ಯಾದೆಯನ್ನು ನೀಡುವಂತಾಗಿದೆ.
ಬಿಜೆಪಿಯ ಎಂ.ಪಿ ಅಭ್ಯರ್ಥಿ ಯಾರೇ ಇರಲಿ ನಮ್ಮ ಗುರಿ ಮಾತ್ರ ಮೋದಿ ಅವರನ್ನು ಗೆಲ್ಲಿಸುವುದು, ಅಟಲ್ ಬಿಹಾರಿ ವಾಜಪೇಯ ಅವರಿಗೆ ಮಾಡಿದ ಮೋಸ ಮೋದಿ ಅವರಿಗೆ ಆಗದಂತೆ ಜಾಗೃತರಾಗಿರೋಣ ,ಬರಲಿರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮೋದಿ ಎಂದು ಮತ ಹಾಕಿ ನರೇಂದ್ರ ಮೋದಿ ಯವರನ್ನು ಗೆಲ್ಲಿಸಿ ಭಾರತವನ್ನು ವಿಶ್ವ ಗುರು ಸ್ಥಾನದಲ್ಲಿ ನಿಲ್ಲಿಸುವ ಮಹತ್ವದ ಸಂಕಲ್ಪ ನಮ್ಮೆಲ್ಲರದ್ದಾಗಬೇಕೆಂದು ಕರೆ ನೀಡಿದರು.
ಯಲಬುರ್ಗಾ ಪಟ್ಟಣ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ ಮಾತನಾಡಿ ನರೇಂದ್ರ ಮೋದಿಯವರನ್ನು ಎಷ್ಟು ವರ್ಣಿಸಿದರೂ ಕಡಿಮೆ.ಅವರು ಆಕಾಶದಂಥ ವ್ಯಕ್ತಿ. ಅಂಥಹ ಪ್ರಧಾನಿ ಹಿಂದೆ ಆಗಿಲ್ಲ, ಮುಂದೆಯೂ ಆಗಲ್ಲ.ಹೀಗಾಗಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಶಕ್ತಿ ತುಂಬಬೇಕು.ಜಗತ್ತೇ ಭಾರತವನ್ನು ನೋಡುವಂಥ ಕೆಲಸ ಅವರು ಮಾಡಿದ್ದಾರೆ ಎಂದು ಹೇಳಿದರು.
ನಮೋ ಬ್ರಿಗೇಡ್ ರಾಜ್ಯಾಧ್ಯಕ್ಷ ವರ್ಧಮಾನ ತ್ಯಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಂಚಾಲಕ ಶರಣೆಗೌಡ ನಿರೂಪಿಸಿದರು.ಗೌತಮ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಗೌರಾ,ಮಂಜುಳಾ ಕರಡಿ,ವೀರಣ್ಣ ಹುಬ್ಬಳ್ಳಿ,ಸುಧಾಕರ ದೇಸಾಯಿ,ಅಮರೇಶ ಹುಬ್ಬಳ್ಳಿ, ಅಯ್ಯನಗೌಡ ಕೆಂಚಮ್ಮನವರ,ಅರವಿಂದಗೌಡ ಪಾಟೀಲ್,ಶಿವಶಂಕರ ದೇಸಾಯಿ,ಸುರೇಶಗೌಡ ಶಿವನ ಗೌಡ್ರು,ಶರಣಪ್ಪ ಗುಂಗಾಡಿ, ವಸಂತ ಬಾವಿಮನಿ, ಮಾರುತಿ ಗೌರಾಳ, ಈರಪ್ಪ ಬಣಕಾರ,ಜಿಲ್ಲಾ ಸಂಚಾಲಕ ನಂದೀಶ,ತಾಲೂಕು ಸಂಚಾಲಕ ಗುರುರಾಜ,ತಾಲೂಕ ಯುವ ಬ್ರಿಗೇಡನ ಬಾಪುಗೌಡ ಪಾಟೀಲ, ಅಂದಪ್ಪ ನರೇಗಲ್, ಕುಮಾರಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು.
ನಿರ್ಭಯ ನ್ಯೂಸ್ ಕನ್ನಡ
" ಇದು ಪ್ರಜಾಧ್ವನಿ"
Post a Comment