ಕಲಾವಿದರ ಏಳಿಗೆಗಾಗಿ ನನ್ನ ಜೀವನ : ಜಾನಪದ ಅಕಾಡೆಮಿ ರಿಜಿಸ್ಟ್ರಾರ ಎನ್ ನಮ್ರತಾ
ಯಲಬುರ್ಗಾ : ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಬಸವಲಿಂಗೇಶ್ವರ ಜಾನಪದ ಕಲಾ ಸಂಘ ಯಲಬುರ್ಗಾ ಸಂಯುಕ್ತ ಆಶ್ರಯದಲ್ಲಿ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜಾನಪದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಜರುಗಿತು.
ಕರ್ನಾಟಕ ಜನಪದ ಅಕಾಡೆಮಿ ರಿಜಿಸ್ಟ್ರಾರ ಎನ್ ನಮ್ರತಾ ಮಾತನಾಡಿ ಜಾನಪದ ಕಲಾವಿದರ ಏಳಿಗೆಯ ಸಲುವಾಗಿ ನಾನು ಸತತ ದುಡಿಯುತ್ತೇನೆ. ಯಾವುದೇ ಕಾರಣಕ್ಕೂ ಕಲಾ ಸೇವೆಯನ್ನು ನಿಲ್ಲಿಸುವುದಿಲ್ಲ. ಕರ್ನಾಟಕ ಜಾನಪದ ಅಕಾಡೆಮಿಗೆ ಮಾತಾ ಮಂಜಮ್ಮ ಜೋಗತಿಯವರು ಅಧ್ಯಕ್ಷರಾದ ಮೇಲೆ 2024ನೇ ಸಾಲಿನ ಮೊದಲ ಕಾರ್ಯಕ್ರಮ ಇದಾಗಿದೆ ಕೊಪ್ಪಳ ಜಿಲ್ಲೆಯಲ್ಲಿ ಸಾಕಷ್ಟು ಕಲಾವಿದರು ಹಾಗೂ ಕಲಾತಂಡಗಳು ಇರುವುದರಿಂದ ಯಲಬುರ್ಗಾದಲ್ಲಿ ಜಾನಪದ ಸಂಕ್ರಾಂತಿ ಸಂಭ್ರಮ ಹಮ್ಮಿಕೊಂಡಿದ್ದು ಕಲಾತಂಡಗಳ ಸಹಕಾರ ಹಾಗೂ ಜನರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.ಉದ್ಘಾಟನೆ ನೆರವೇರಿಸಿದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿಗಳು ಮಾತನಾಡಿ ಆಧುನಿಕತೆ ಭರಾಟೆಯಲ್ಲಿ ದೇಸಿ ಕಲೆ,ಜಾನಪದ,ಸಾಹಿತ್ಯ,ಸಂಪ್ರದಾಯ, ಆಚರಣೆಗಳು ಮರೆಯಾಗುತ್ತಿರುವ ದಿನಮಾನಗಳಲ್ಲಿ ಜಾನಪದ ಸಂಕ್ರಾಂತಿ ಸಂಭ್ರಮ ಮಾಡುವ ಮೂಲಕ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಪ್ರತಿಯೊಬ್ಬರು ಜಾನಪದ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಹೇಳಿದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ನಾಗೇಶ್ ಮಾತನಾಡಿ ಜಾನಪದ ಕಲೆಗಳು ಉಳಿಯಬೇಕಾದರೆ ಶಾಲಾ ಕಾಲೇಜ್‌ಗಳಲ್ಲಿ ತರಬೇತಿ ಶಿಬಿರಗಳನ್ನು ಮಾಡಬೇಕು. ಗ್ರಾಮೀಣ, ತಾಲೂಕು ಮಟ್ಟದಲ್ಲಿ ಜಾನಪದ ಕಾರ್ಯಕ್ರಮಗಳನ್ನ ಆಯೋಜಿಸಬೇಕು ಅಂದಾಗ ಜಾನಪದ ಕಲೆಯ ಮಹತ್ವ ತಿಳಿಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಜಾನಪದ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಜಾನಪದ ಕಲಾತಂಡಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡೊಳ್ಳುಕುಣಿತ, ಹಗಲುವೇಷ, ಭಜನೆ ಕುಣಿತ, ವೀರಗಾಸೆ, ಕೀಲು ಕುದುರೆ , ಲಂಬಾಣಿ ನೃತ್ಯ, ಮೋಜಿನ ಗೊಂಬೆ, ಹಲಗೆವಾದನ ಪ್ರದರ್ಶನಗಳು ಜನರನ್ನು ರಂಜಿಸಿದವು.
ಈ ಸಂದರ್ಭದಲ್ಲಿ ಅಮರೇಶ ಹುಬ್ಬಳ್ಳಿ, ರೇವಣಪ್ಪ ಹಿರೇ ಕುರುಬರ, ಜಾನಪದ ಅಕಾಡೆಮಿ ಸೂಪರ್ ಡೆಂಟ್ ಪ್ರಕಾಶ್ ಅಂಗಡಿ, ಡಾ. ವಿರೂಪಾಕ್ಷಯ್ಯ ಹಿರೇಮಠ, ಅಡಿವೆಯ್ಯ ಕಲ್ಯಾಣ ಮಠ, ಈಶಪ್ಪ ಸ್ಟ್ಯಾಂಪಿನ್, ಶರಣಯ್ಯ ಇಟಗಿ, ಶರಣು ಶೆಟ್ಟರ್, ಬಸವರಾಜ ಕೊಡ್ಲಿ ಮತ್ತಿತರರು ಉಪಸ್ಥಿತರಿದ್ದರು.
ನಿರ್ಭಯ ನ್ಯೂಸ್ ಕನ್ನಡ"
"ಇದು ಪ್ರಜಾ ಧ್ವನಿ"
Post a Comment