ಬರ ಪರಿಹಾರ ವಿತರಣೆಗೆ ಕೃಷಿ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ
ಯಲಬುರ್ಗಾ : ತಾಲೂಕಿನ ಕೃಷಿ ಕರ್ನಾಟಕ ರಾಜ್ಯ ರೈತ ಸಂಎದ ವತಿಯಿಂದ ವಿವಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಯಲಬುರ್ಗಾ ಪಟ್ಟಣದ ಚಹಶಿಲ್ದಾರ ಕಛೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿ ಹೋಬಳಿಗೊಂದು ಗೋಶಾಲೆ ನಿರ್ಮಾಣ ಮಾಡಬೇಕು ಮತ್ತು ಈಗಾಗಲೆ ಸರಕಾರ ಯಲಬುರ್ಗಾ ಮತ್ತು ಕುಕನೂರು ತಾಲೂಕನ್ನ ಬರಪೀಡಿತ ತಾಲೂಕೆಂದು ಘೋಷಣೆಮಾಡಿದೆ ಆದರೆ ಇದುವರಗೆ ಸಮರ್ಪಕವಾಗಿ ರೈತರಿಗೆ ಬರ ಪರಿಹಾರ ತಲುಪುತಿಲ್ಲ ವೆಂದು ವಕೀಲ ಹಾಗೂ ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕ ಉಪಾಧ್ಯಕ್ಷ ಹನಮಂತಪ್ಪ ನಾಗರಾಳ ಒತ್ತಾಯಿಸಿದರು
ಪಟ್ಟಣದ ತಹಶಿಲ್ದಾರ ಕಛೇರಿಯ ಮುಂದೆ ಪ್ರತಿಭಟನೆ ನಡಿಸಿ ತಹಶಿಲ್ದಾರಗೆ ಮನವಿ ಸಲ್ಲಿ ಮಾತನಾಡಿದ ಅವರು ರೈತರಿಗೆ ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರಕಾರ ರೈತರಿಗೆ ಕೇವಲ 2000 ರೂಪಾಯಿ ಬರಪರಿಹಾರ ವಿತರಣೆ ಮಾಡಿ ಕೈ ತೋಳೆದುಕೊಂಡು ಬಿಟ್ಟಿದೆ ಬರ ಪರಿಹಾರ ಒಬ್ಬರಿಗೆ ಸಿಕ್ಕರೆ ಮತ್ತೋಬ್ಬರಿಗೆ ಸಿಕ್ಕಿಲ್ಲ ಆದ್ದರಿಂದ ಬರಪರಿಹಾರವನ್ನ ಕೇಂದ್ರ ಮತ್ತು ರಾಜ್ಯ ಸರಕಾರ ಕನೀಷ್ಠ 15 ಸಾವೀರ ರೂಪಾಯಿಯಾದರು ನೀಡಬೇಕು ಸರಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯು ತಾಲೂಕಿನ ಕೆಲವೂ ಮಹಿಳೆಯರಿಗೆ ಇದುವರಗೆ ಒಂದು ಬಾರಿಯಾದರು ಹಣ ಜಮಾ ಆಗಿರುವದಿಲ್ಲ ಆದ್ದರಿಂದ ಯಾರಿಗೆ ಜಮಾ ಆಗಿರುವದಿಲ್ಲವೋ ಅಂತವರನ್ನ ಗುರುತಿಸಿ ಗೃಹ ಲಕ್ಷ್ಮಿ ಹಣ ಸರಿಯಾಗಿ ತಲುಪುವಂತೆ ಕ್ರಮ ಕೇಗೊಳ್ಳಬೇಕು ಬರಪೀಡಿತ ತಾಲೂಕಾದ ಕಾರಣ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದು, ಹಳ್ಳಗಳಿಗೆ ನೀರು ಹರಿಸಲು ಸ್ಟೋರಲ್ ವಾಲ್ ಓಪನ್ ಮಾಡಿ ನೀರು ಹರಿಸಲು ಮುಂದಾಗ ಬೇಕು
ತಾಲೂಕಿನ ಸರ್ವೇ ಅಧಿಕಾರಿಗಳು ಸರ್ವೇ ಮಾಡುವ ಸಂದರ್ಭದಲ್ಲಿ ಅಕ್ಕ ಪಕ್ಕದ ಜಮಿನುದಾರರಿಗೆ ಮಾಹಿತಿ ನೀಡದೆ ರೈತರಿಗೆ ನೋಟಿಸ್ ನೀಡದೇ ವೈಯಕ್ತಿಕವಾಗಿ ಸರ್ವೇ ಮಾಡಿ ಪಹಣಿ ಮಾಡುತ್ತಿರುವದು ಕಂಡು ಬಂದಿದೆ , ಇದನ್ನು ತಡೆ ಹಿಡಿದು ತಪ್ಪಿತಸ್ಥ ಸರ್ವೇದಾರರ ವಿರುದ್ದು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಹೋರಾಟದಲ್ಲಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹನಮಗೌಡ ಮಾಲಿ ಪಾಟೀಲ್,
ಜಿಲ್ಲಾಧ್ಯಕ್ಷ ಶಂಕರಪ್ಪ ತಳವಾರ,ತಾಲೂಕ ಅಧ್ಯಕ್ಷ ಮಲ್ಲಪ್ಪ ಲಕ್ಕಲಕಟ್ಟಿ ಉಪಾಧ್ಯಕ್ಷ ಯಲ್ಲಪ್ಪ ತೊಂಡಿಹಾಳ, ಉಪಾಧ್ಯಕ್ಷ ಮರಿಯಪ್ಪ ತಳವಾರ,ತಾಲೂಕ ಪ್ರಧಾನ ಕಾರ್ಯದರ್ಶಿಮಾರುತಿ ಹೆಗಡೆ, ಗ್ರಾಮ ಘಟಕದ ಅಧ್ಯಕ್ಷ ದುರಗಪ್ಪ ತಳವಾರ ಸೇರಿದಂತೆ ಮತ್ತೀತರರು ಹೋರಾಟದಲ್ಲಿ ಪಾಲ್ಗೋಂಡಿದ್ದರು.
ನಿರ್ಭಯ ನ್ಯೂಸ್ ಕನ್ನಡ
Post a Comment