ಮಾರ್ಚ್ 7ಕ್ಕೆ ಬೆಳಗಾವಿಯ ಗಾಂಧಿ ನಗರದಲ್ಲಿ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಉದ್ಘಾಟನೆ ಸಮಾರಂಭ
ಬೆಳಗಾವಿ : ಡಿಜಿಟಲ್ ನ್ಯೂಸ್ ಅಸೋಸಿಯೇಷನ್ (ರಿ)ನ ಉದ್ಘಾಟನಾ ಸಮಾರಂಭವು 2024 ರ ಮಾರ್ಚ್ 7 ರಂದು ಬೆಳಗಾವಿಯ ಸಂಕಮ ಹೋಟೆಲ್ನಲ್ಲಿ ಸಂಜೆ 5:00 ಗಂಟೆಗೆ ಜರುಗಲಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಕೃಷ್ಣ ಸಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ನೆರವೇರಿಸಲಿದ್ದು ಡಿಜಿಟಲ್ ಮಾಧ್ಯಮದ ಪ್ರಾಮುಖ್ಯತೆ ಮತ್ತು ಜವಾಬ್ದಾರಿಯ ಕುರಿತು ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ,
ಬೆಳಗಾವಿ ಸಂಸದೆ ಮಂಗಳಾ ಸುರೇಶ್ ಅಂಗಡಿ, ರಾಜ್ಯಸಭಾ ಸಂಸದ ಶ್ರೀ ಈರಣ್ಣ ಕಡಾಡಿ,
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಶ್ರೀ ರಾಜು (ಆಸಿಫ್ )ಸೇಠ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ
ಶ್ರೀ ಅಭಯ್ ಪಾಟೀಲ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ
ಶ್ರೀ ಹೇಮಂತ್ ನಿಂಬಾಳ್ಕರ ಉಪಸ್ಥಿತರಿರುವರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಡಿಜಿಟಲ್ ನ್ಯೂಸ್ ಅಸೋಸಿಯೇಷನ್(ರಿ) ಅಧ್ಯಕ್ಷರು ಹಾಗೂ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಾದ ಶ್ರೀ ಜಸ್ಟೀಸ್ ಅರವಿಂದ್ ಶಿವನಗೌಡ ಪಾಚ್ಛಾಪುರೆ ವಹಿಸಿಕೊಂಡು ಸಂಘದ ಉದ್ದೇಶ ಮತ್ತು ಧ್ಯೇಯಗಳನ್ನು ವಿವರಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಮಾಜಿ ಶಾಸಕರು ಹಾಗೂ ಕರ್ನಾಟಕ ಘಟಕ ಬಿಜೆಪಿ ಉಪಾಧ್ಯಕ್ಷ
ಶ್ರೀ ಅನಿಲ ಬೆನಕೆ ಹಾಗೂ ಮಾಜಿ ಶಾಸಕಿ
ಶ್ರೀಮತಿ ಅಂಜಲಿ ಹೇಮಂತ್ ನಿಂಬಾಳ್ಕರ್, ಮಾಜಿ ಶಾಸಕ ಶ್ರೀ ಸಂಜಯ್ ಪಾಟೀಲ್ ಭಾಗವಹಿಸಿ ಡಿಜಿಟಲ್ ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ಬಗ್ಗೆ ಮಾತನಾಡಲಿದ್ದಾರೆ.
ಸಿಇಓ ಪ್ರಸಾದ ಕಂಬಾರ,ವಕ್ತಾರ ಇಕ್ಬಾಲ ಜಕಾತಿ,
ವರ್ಕಿಂಗ್ ಕಮೀಟಿ ಅಧ್ಯಕ್ಷ್ಯ ಮಹಾದೇವ ಪವಾರ್,
ಕೋ-ಆರ್ಡಿನೇಟರ್ ದೀಪಕ್ ಸುತಾರ್ ಹಾಗೂ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ನ ರಾಜ್ಯದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸುವರು.
ಡಿಜಿಟಲ್ ನ್ಯೂಸ್ ಅಸೋಸಿಯೇಷನ್ (DNA) ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ಬೆಳಗಾವಿಯಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಸೇರಲು ವೆಬ್‌ಸೈಟ್: https://www.digitalnewsassociation.com/ಗೆ ಭೇಟಿ ನೀಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರ್ಭಯ ನ್ಯೂಸ್ ಕನ್ನಡ
" ಇದು ಪ್ರಜಾಧ್ವನಿ"
Post a Comment