YELBURGA : ಶ್ರೀ ಸಿದ್ದರಾಮೇಶ್ವರ ಬೋವಿ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ನೂತನ ಅಧ್ಯಕ್ಷರಾಗಿ ದುರಗಪ್ಪ ಕರಮುಡಿ,ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ ಯಲಕಲ

ಯಲಬುರ್ಗಾ: ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ಸಿದ್ದರಾಮೇಶ್ವರ ಭೋವಿ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷ ರೇವಣಪ್ಪ ವಜ್ರಬಂಡಿ, ನಿಕಟಪೂರ್ವ ಅಧ್ಯಕ್ಷ ನಾಗಪ್ಪ ವಡ್ಡರ,  ಕಾರ್ಯದರ್ಶಿ ಶರಣಪ್ಪ ಹಿರೇಮನಿ ನೇತೃತ್ವದಲ್ಲಿ ಸಂಘದ ನೂತನ ಗೌರವ ಅಧ್ಯಕ್ಷರನ್ನಾಗಿ ಯಮನೂರಪ್ಪ ಮನ್ನೆರಾಳ,  ಅಧ್ಯಕ್ಷರನ್ನಾಗಿ ದುರಗಪ್ಪ ಕರಮುಡಿ,ಉಪಾಧ್ಯಕ್ಷರನ್ನಾಗಿ ಮುತ್ತಣ್ಣ ವಡ್ಡರ, ಕನಕಪ್ಪ ಹಿರೇಮನಿ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ ಯಲಕಲ, ಸಹ ಕಾರ್ಯದರ್ಶಿಯಾಗಿ ಶೇಖಪ್ಪ ವಡ್ಡರ,ಯಮನೂರಪ್ಪ ಮೈಲಾಪುರ,ಸಂಚಾಲಕರಾಗಿ ಶರಣಪ್ಪ ಪೂಜಾರ, ತಿಮ್ಮಣ್ಣ ವಡ್ಡರ, ಖಜಾಂಚಿಗಳಾಗಿ ಉಮೇಶ ವಡ್ಡರ, ದೇವಪ್ಪ ಬೋವಿ, ಸಂಘಟನಾ ಕಾರ್ಯದರ್ಶಿಗಳಾಗಿ ಮಾರುತಿ ಗೊಂಡಬಾಳ, ಬಸವರಾಜ ಯಡ್ಡೋಣಿ ಹಾಗೂ ಪತ್ರಿಕಾ ಪ್ರತಿನಿಧಿಯಾಗಿ ಬಸವರಾಜ ಕರಮುಡಿ ಯವರನ್ನು ಆಯ್ಕೆ ಮಾಡಲಾಯಿತು.
ನಿಕಟ ಪೂರ್ವ ಅಧ್ಯಕ್ಷ ನಾಗಪ್ಪ ವಡ್ಡರ ಮಾತನಾಡಿ ನೂತನ ಪದಾಧಿಕಾರಿಗಳು ಸಮಾಜವನ್ನು ಉನ್ನತ ಮಟ್ಟದಲ್ಲಿ ಸಂಘಟನೆ ಮಾಡಬೇಕು.ಸಮಾಜವನ್ನು ಸಂಘಟನೆ ಮಾಡಲು ಎಲ್ಲ ಸಮಾಜದ ಸಹಾಯ ಸಹಕಾರದೊಂದಿಗೆ ಸಮಾಜದ ಹಿತರಕ್ಷಣೆ ಕಾಪಾಡಬೇಕು ಎಂದು ಅವರು ಹೇಳಿದರು.
ನೂತನ ಅಧ್ಯಕ್ಷ ದುರಗಪ್ಪ ಕರಮುಡಿ ಮಾತನಾಡಿ ಭೋವಿ ಜನಾಂಗವು ತೀರಾ ಹಿಂದುಳಿದ ಜನಾಂಗವಾಗಿದೆ.ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯುವಲ್ಲಿ ನಾವು ವಂಚಿತರಾಗಿದ್ದೇವೆ. ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಾವು ಮುಂದುವರಿಯಲು ಸಮಾಜದ ಸಂಘಟನೆ ತುಂಬಾ ಅವಶ್ಯವಾಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಪ್ರಬಲವಾಗಿ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಜು ಪೂಜಾರ,ಶರಣಪ್ಪ ತೊಂಡಿಹಾಳ,ದುರಗಪ್ಪ ರೋಣದ,ಮಹೇಶ ವಡ್ಡರ, ಯಮನೂರಪ್ಪ ಗುನ್ನಾಳ, ತಿಪ್ಪಣ್ಣ ವಡ್ಡರ, ಹುಲಗಪ್ಪ ಶಾಸ್ತ್ರಿ, ಸಣ್ಣ ಯಮನೂರಪ್ಪ ಚಿಕ್ಕಮನ್ನಾಪುರ, ನಾಗರಾಜ ವಣಗೇರಿ, ತಿಪ್ಪರೆಡ್ಡಿ ಗಾಣದಾಳ, ಗಿರಿಯಪ್ಪ ಗಾಣದಾಳ, ಹಿರೇಹುಲುಗಪ್ಪ ಜಿರಾಳ, ಹನುಮಂತಪ್ಪ ಜೀರಾಳ, ಹನುಮಂತಪ್ಪ ಮಂಟಗೇರಿ, ಯಮನೂರಪ್ಪ ಜಿರಾಳ, ಶರಣಪ್ಪ ಬೋವಿ, ದುರಗಪ್ಪ ವಣಗೇರಿ, ರಾಹುಲ್ ಬೋವಿ, ದುರಗಪ್ಪ ಗಂಗಾವತಿ, ಹುಲಗಪ್ಪ ಬಂಡಿವಡ್ಡರ, ವೆಂಕಟೇಶ ಹಿರೇವಡ್ರಕಲ್,ಶರಣಪ್ಪ ಕಟಿಗಿಹಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

                 ನಿರ್ಭಯನ್ಯೂಸ್ ಕನ್ನಡ
                    "ಇದು ಪ್ರಜಾ ಧ್ವನಿ"

Post a Comment

Previous Post Next Post

FLASH

Contact for News and Ads on Nirbhaya News Kannada : 9060723440