ಸದೃಢ ಭಾರತ ಅಭಿಯಾನ ಮತ್ತು ಮುಂಜಾವು ಮಹಿಳಾ ಸೌಹಾರ್ದ ಸಹಯೋಗದಲ್ಲಿ ಶಹೀದ್ ದಿವಸ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಯಲಬುರ್ಗಾ
ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವ ನಾವು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಬಗ್ಗೆ ಯೋಚನೆ ಮಾಡುತ್ತಿಲ್ಲ, ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದೇವೆ. ಮಕ್ಕಳು ಅಪೌಷ್ಟಿಕತೆಯನ್ನು ಮೆಟ್ಟಿನಿಂತು ಮುಕ್ತವಾದಾಗ ಮಾತ್ರ ಭಾರತ ಸದೃಢ ದೇಶವಾಗುತ್ತದೆ ಎಂದು ಸದೃಢ ಭಾರತ ಅಭಿಯಾನ ಸಂಸ್ಥಾಪಕ ಸೋಮಶೇಖರ ಹವಾಲ್ದಾರ್ ಹೇಳಿದರು.
ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ ಶಾದಿಮಹಲ್ ಆವರಣದಲ್ಲಿ ಸದೃಢ ಭಾರತ ಅಭಿಯಾನ ಮತ್ತು ಮುಂಜಾವು ಮಹಿಳಾ ಸೌಹಾರ್ದ ಸಹಯೋಗದಲ್ಲಿ ಆಯೋಜಿಸಿದ್ದ 93ನೆ" ಶಹೀದ್ ದಿವಸ್ ಹಾಗೂ 49ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮೂಹ ಸಂಸ್ಥೆ ಉಪ ನಿರ್ದೇಶಕ ಎಸ್ ಎಸ್ ಗಂಟಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಹಿಳೆಯರು ಸಾಧನೆಯಲ್ಲಿ ಒಂದು ಹೆಜ್ಜೆ ಮುಂದೆ ನಡೆದಿದ್ದಾರೆ. ಮಹಿಳೆಯರ ಸಹಕಾರದಿಂದ ಇಂದು ಸಮೂಹ ಸಂಸ್ಥೆ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿ ಯಾಗಿದೆ ಎಂದು ಅವರು ಹೇಳಿದರು.
ರಂಗಭೂಮಿ ನಿರ್ದೇಶಕ ಸೋಮಣ್ಣ ಮೇಸ್ಟ್ರು ಮಾತನಾಡಿ ಈ ದೇಶಕ್ಕೆ ಭಗತ್ ಸಿಂಗ್,ರಾಜಗುರು, ಸುಖದೇವ್ ರಂತಹ ಹಲವಾರು ಹುತಾತ್ಮರನ್ನ ಕೊಟ್ಟವರು ತಾಯಂದಿರು, ಪ್ರತಿಕ್ಷಣದಲ್ಲೂ
ನಿಜವಾದ ಬಲಿದಾನ ಮಾಡುತ್ತಿರುವ ಕೀರ್ತಿ ಮಹಿಳೆಯರಿಗೆ ಸಲ್ಲುತ್ತದೆ.ಸದೃಢ ಮಹಿಳೆಯರಿಂದ ಸದೃಢ ಕುಟುಂಬವಾಗುತ್ತದೆ, ಸದೃಢ ಕುಟುಂಬದಿಂದ ಸದೃಢ ಗ್ರಾಮವಾಗುತ್ತದೆ, ಸದೃಢ ಗ್ರಾಮಗಳಿಂದ ಸದೃಢ ದೇಶವಾಗುತ್ತದೆ.ಪ್ರತಿಯೊಬ್ಬ ಮಹಿಳೆಯರು ಸಂಘಟಿತರಾಗಬೇಕು ಎಂದು ಅವರು ಹೇಳಿದರು.
ಶಹೀದ್ ದಿವಸ್ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪೂಜಾ ಕಾರ್ಯಕ್ರಮಕ್ಕೆ ರಾಜ್ಯ ಜಾನಪದ ಪ್ರಶಸ್ತಿ ಪುರಸ್ಕೃತ ಕಲಾವಿದ ಹಾಗೂ ಪುಣ್ಯಕೋಟಿ ಸಂಸ್ಥೆಯ ಅಧ್ಯಕ್ಷ ಡಬ್ಲ್ಯೂ ಹೆಚ್. ಯಕ್ಕರನಾಳ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಜಾವು ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಹಾಸಗಲ್ ನ ಅಧ್ಯಕ್ಷೇ ಬಸಮ್ಮ ಓಜನಹಳ್ಳಿ ವಹಿಸಿದ್ದರು.
ಡಿಡಿಆರ್ ಪಿ ಶಿವಗಂಗಾ ಪ್ರಾರ್ಥನೆ ಗೀತೆ ಹಾಡಿದರು.
ಮಹಿಳಾ ದಿನಾಚರಣೆ ನಿಮಿತ್ಯ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ವಿಎಸ್.ಡಿಡಿಆರ್ ಪಿ ಗಳಿಗೆ, ದಾರಿದೀಪ ಸಂಪನ್ಮೂಲ ವ್ಯಕ್ತಿಗಳಿಗೆ, ಸಮೂಹ ಸಿಬ್ಬಂದಿಗಳಿಗೆ,ವಿಎಸ್ ಬೆಸ್ಟ ಅಚಿವರ್ಸ್ ಗಳಿಗೆ ಹಾಗೂ ರಂಗೋಲಿ ಸ್ಪರ್ಧೆ ವಿಜೇತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಾಹಿತಿ ಹಾಗೂ ಪತ್ರಕರ್ತೆ ಸಾವಿತ್ರಿ ಮುಜುಮದಾರ,
ಯಲಬುರ್ಗಾ ಪಿಯು ಕಾಲೇಜ್ ಶಿಕ್ಷಕಿ ಸುನಂದ ತಳವಗೇರಾ,ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕೊಪ್ಪಳ ಅಭಿವೃದ್ಧಿ ನಿರೀಕ್ಷಕಿ ಪೂರ್ಣಿಮಾ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸದಸ್ಯ ಶೇಖರಗೌಡ ರಾಮತಾಳ, ದಾರಿದೀಪ ಸಂಪನ್ಮೂಲ ವ್ಯಕ್ತಿ ಶಿಲ್ಪ ಆಡೂರು, ಕುಕನೂರು ಎನ್ ಆರ್ ಎಲ್ ಎಂ ವಲಯ ವ್ಯವಸ್ಥಾಪಕಿ ಪೂಜಾ ನಾಯಕ, ಯಲಬುರ್ಗಾ ವೈದ್ಯಾಧಿಕಾರಿ ಸಬೀನಾ ಬೇಗಂ, ಸ್ವಸಹಾಯ ಸಂಘದ ಸದಸ್ಯೆ ಖಾಜಾಬೀ ಲಾಲಬಾಗ್, ವಕೀಲೆ ವಿಜಯಲಕ್ಷ್ಮಿ, ಪೊಲೀಸ್ ಇಲಾಖೆ ಸಿಬ್ಬಂದಿ ಬಾಳನಗೌಡ ಪಾಟೀಲ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಮೂಹ ಸಾಮರ್ಥ್ಯ ಪ್ರೋಗ್ರಾಮ್ ಮ್ಯಾನೇಜರ್ ನಾಗರಾಜ ಹಳ್ಳಿಕೇರಿ, ವಿಶಾಲ ಸಮೃದ್ಧಿ ಸೌಹಾರ್ದ ಕೋ ಆಪರೇಟಿವ್ ಬ್ರಾಂಚ್ ಮ್ಯಾನೇಜರ್ ಗಿರೀಶ್ ಹಿರೇಹಾಳ, ಸಮೂಹ ಸಂಸ್ಥೆ ಕೆ ಜಿ ಬಿ ಪ್ರೊಗ್ರಾಮ್ ಮ್ಯಾನೇಜರ್ ಬಸವರಾಜ ಕಲ್ಲಿ, ದಾರಿದೀಪ ಕೊ ಆರ್ಡಿನೇಟರ್ ಸ್ವರೂಪಾ,ಮುಂಜಾವು ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಂಘದ ಯಲಬುರ್ಗಾ ಬ್ರಾಂಚ್ ಮ್ಯಾನೇಜರ್ ಮಾಲತಿ, ತಾವರಗೇರಾ ಬ್ರಾಂಚ್ ಮ್ಯಾನೇಜರ್ ಇಂದ್ರಮ್ಮ ಬಡಿಗೇರ, ಕನಕಗಿರಿ ಏರಿಯಾ ಮ್ಯಾನೇಜರ್ ಹನುಮಂತ ರೆಡ್ಡಿ, ಹಿರೇವಂಕಲಕುಂಟ ಏರಿಯಾ ಮ್ಯಾನೇಜರ್ ಜಯಂತಿ ಎಚ್ ಹಾಗೂ ಮುಂಜಾವು, ವಿಶಾಲ,ಸಮೂಹ ಸಂಸ್ಥೆಯ ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾ ಧ್ವನಿ "
Post a Comment