ಶ್ರೀಮತಿ ಎ ಎಸ್ ತೆಂಗಿನಕಾಯಿ ಶಾಲೆಯಲ್ಲಿ
76ನೇ ಗಣರಾಜ್ಯೋತ್ಸವ ಆಚರಣೆ
ಯಲಬುರ್ಗಾ : ಪಟ್ಟಣದ ಶ್ರೀಮತಿ ಎ. ಎಸ್ ತೆಂಗಿನಕಾಯಿ ಪೂ.ಪ್ರಾ , ಕಿ. ಪ್ರಾ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಶ್ರೀಮತಿ ಅನ್ನಪೂರ್ಣಮ್ಮ ತೆಂಗಿನಕಾಯಿಯವರು ಧ್ವಜಾರೋಹಣ ನೆರವೇರಿಸಿದರು.ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಮರ್ಪಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಸಂಗಣ್ಣ ತೆಂಗಿನಕಾಯಿ ಮಾತನಾಡುತ್ತಾ ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸೋಣ ಅದಕ್ಕೆ ಬದ್ದರಾಗೋಣ ಎಂದು ಸಂವಿಧಾನದ ಅರ್ಥ, ಮಹತ್ವ, ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಶರಣಪ್ಪ ಓಜನಹಳ್ಳಿ, ಬಸವರಾಜ ಅಧಿಕಾರಿ, ಮಲ್ಲಿಕಾರ್ಜುನ ಹಡಪದ ಭಾಗವಹಿಸಿದ್ದರು.
ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಆಶಾರಾಣಿ, ಶಿಕ್ಷಕರಾದ ಗಾಯತ್ರಿ,ಶೋಭಾ, ರಮೇಶ, ನಂದಾ ತೆಂಗಿನಕಾಯಿ,ರಚನಾ ತೆಂಗಿನಕಾಯಿ ವಿಜಯಲಕ್ಷೀ ತೆಂಗಿನಕಾಯಿ ಮತ್ತಿತರರು ಇದ್ದರು.
ನಿರ್ಭಯ ನ್ಯೂಸ್ ಕನ್ನಡ
"ಇದು ಪ್ರಜಾ ಧ್ವನಿ"
Post a Comment